ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಮುಖ್ಯ ಅಂಶಗಳು:


  • ಬ್ಯಾಂಕಿನ ಸದಸ್ಯರಾಗಿ ದಿನಾಂಕ: 01-06-2014 ಕ್ಕೆ ಮೂರು ತಿಂಗಳು ಆಗಿರಬೇಕು.
  • ಹುಟ್ಟಿದ ಮಗುವಿನಿಂದ ಹಿಡಿದು ಕುಟುಂಬದ ಎಲ್ಲಾ ವಯಸ್ಸಿನ ಸದಸ್ಯರು ಇದರ ಪ್ರಯೋಜನ ಪಡೆಯಬಹುದು.
  • ಯಶಸ್ವಿನಿ ಕೇವಲ ಶಸ್ತ್ರ ಚಿಕಿತ್ಸೆಗಳಿಗೆ ಮಾತ್ರ ಅನ್ವಯವಾಗುವ ಯೋಜನೆ.
  • ಯಶಸ್ವಿನಿ ಟ್ರಸ್ಟಿನಿಂದ ಅಂಗೀಕರಿಸಿದ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ನಿಗಧಿತ ಮಿತಿಯೊಂದಿಗೆ ನಗದು ರಹಿತವಾಗಿ ಸೌಲಭ್ಯ ಪಡೆಯಲು ಲಭ್ಯವಿರುತ್ತದೆ.
  • ಯಶಸ್ವಿನಿ ಯೋಜನೆಯಲ್ಲಿ, ಆ ವರ್ಷದ ಯೋಜನಾ ಅವಧಿಯಲ್ಲಿ ಪ್ರತಿ ಸದಸ್ಯನು ಶಸ್ತ್ರ ಚಿಕಿತ್ಸೆಗಳಿಗೆ ಒಂದು ಬಾರಿ ದಾಖಲಾತಿಗೆ (Single Admission) ಗರಿಷ್ಠ ಮಿತಿ ರೂ. 1.75 ಲಕ್ಷಗಳು. ಒಂದಕ್ಕಿಂತ ಹೆಚ್ಚು ಬಾರಿ ದಾಖಲಾದಲ್ಲಿ (Multiple Admission) ಗರಿಷ್ಠ ಮಿತಿ ರೂ. 2.50 ಲಕ್ಷಗಳು.
  • 2014 - 15 ನೇ ಸಾಲಿಗೆ ಪ್ರತಿ ವ್ಯಕ್ತಿಯು ರೂ. 700 ಗಳನ್ನು ನೋಂದಾವಣಿ ಅವಧಿಯಲ್ಲಿ ಪಾವತಿಸಬೇಕು.
  • ಮುಖ್ಯ ಅರ್ಜಿದಾರನೊಂದಿಗೆ ಐದಕ್ಕಿಂತ ಹೆಚ್ಚಿನ ಕುಟುಂಬದ ಸದಸ್ಯರನ್ನು, ನೊಂದಯಿಸಿದ್ದಲ್ಲಿ ಶೇ. 15 ರ ರಿಯಾಯಿತಿ ದೊರೆಯುತ್ತದೆ.
  • ಸದಸ್ಯರು ಬೇರೆ ಯಾವುದೇ ವಿಮಾ ಸಂಸ್ಥೆಯಲ್ಲಿ ಆರೋಗ್ಯ ವಿಮೆಯನ್ನು ಮಾಡಿಸಿರಬಾರದು.
  • ಸದಸ್ಯರು ಸರ್ಕಾರಿ ನೌಕಾರರಾಗಿರಬಾರದು ಹಾಗೂ ESI ಸದಸ್ಯನಾಗಿರಬಾರದು.
  • ಈ ಯೋಜನೆಯ ನೊಂದಾವಣಿಯ ಕೊನೆಯ ದಿನಾಂಕ: 30-09-2014.
  • ಹೆಚ್ಚಿನ ವಿವರಗಳನ್ನು ನಂ. 1162 ದಿನಾಂಕ 27-09-2013 ರ ಕರ್ನಾಟಕ ರಾಜ್ಯ ಪತ್ರದಿಂದ ಪಡೆಯಬಹುದು ಹಾಗೂ ಈ ಕೆಳಗಿನ ವೆಬ್ ಸೈಟನ್ನು ಸಂಪರ್ಕಿಸಿ.
Website : www.yeshasvini.kar.nic.in
Email : yeshtrust@gmail.com
Phone No : 080- 26783111, 080- 26784111,
Fax. No : 080-26782622.
Co-Ordinator : 9342391291 (Venkoba Rao)