ನಾಮ ನಿರ್ದೇಶನ :

ಬ್ಯಾಂಕಿನ ಪ್ರತಿಯೊಬ್ಬ ಷೇರುದಾರ ಹಾಗೂ ಠೇವಣಿದಾರನು ತಮ್ಮ ಪ್ರತಿಯೊಂದು ಖಾತೆಗಳಿಗೂ ಪ್ರತ್ಯೇಕವಾಗಿ ನಾಮನಿರ್ದೇಶನ ಮಾಡುವ ಸೌಲಭ್ಯವಿದ್ದು, ಈ ಸೌಲಭ್ಯವನ್ನು ಕಡ್ಡಾಯವಾಗಿ/ಅಗತ್ಯವಾಗಿ ಮಾಡಬೇಕಾಗಿರುತ್ತದೆ. ನಾಮ ನಿರ್ದೇಶನವನ್ನು ಕಾಲಕಾಲಕ್ಕೆ ಪರಿಷ್ಕರಿಸಲು ಹಾಗೂ ಬದಲಿಸಲು ಅವಕಾಶ ಕೂಡಾ ಕಲ್ಪಿಸಲಾಗಿದೆ. ನಾಮನಿರ್ದೇಶನವನ್ನು ಮಾಡದಿರುವ ಗ್ರಾಹಕರು/ಸದಸ್ಯರು ತಮ್ಮ ಖಾತೆಗಳಿಗೆ ಕೂಡಲೇ ಮಾಡಿಸಬೇಕಾಗಿ ವಿನಂತಿ.


ಠೇವಣಿ ವಿಮಾ ಯೋಜನೆ:


  • ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾನುಸಾರ ಎಲ್ಲಾ ಠೇವಣಿದಾರರ ರೂ. 5,00,000/- ದ ವರೆಗಿನ ಪ್ರತಿ ಠೇವಣಿಗಳಿಗೆ "ಡಿಪಾಜಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಮುಂಬಯಿ", ಇವರಿಂದ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ.