ಶ್ರೀ ಶ್ರೀಪತಿ ರಾವ್ ಪಿ. ಎನ್.

 

ಶ್ರೀ ಶ್ರೀಪತಿ ರಾವ್ ಪಿ. ಎನ್.

ಅಧ್ಯಕ್ಷರು.
  ಜನ್ಮ ದಿನಾಂಕ: 22-02-1943.  
  ವಿದ್ಯಾರ್ಹತೆ: ಬಿ. ಎಸ್ಸಿ.  
  ಉದ್ಯೋಗ/ ವ್ಯಾಪಾರ: ಹೋಟೆಲ್ ಉದ್ಯಮ  
  ವಿಳಾಸ: ನಂ. 600/616, " ಭಾಗೀರಥಿ ", ಮೆಹಂತ ಲೇಔಟ್, ಬೆಂಗಳೂರು - 560019.  
  ಫೋನ್ ನಂ: 9945515119.  
 

ಸಂತ ಜೋಸೆಫರ ಕಾಲೇಜಿನಲ್ಲಿ ಅಧ್ಯಯನ ಮಾಡಿ ವಿಜ್ಞಾನ ಪದವಿ. 1939ರಲ್ಲಿ ಆರಂಭವಾದ ರಾಘವೇಂದ್ರ ಪ್ರಸನ್ನ ಹೋಟೆಲ್ ಮಾಲೀಕರು. ಐವತ್ತು ವರ್ಷಗಳಿಂದಲೂ ಹೋಟೆಲ್ ಉದ್ಯಮಿಯಾಗಿದ್ದಾರೆ. ದೇಶ ವಿದೇಶಗಳಲ್ಲಿ ಪ್ರವಾಸ ಕೈಗೊಂಡು ಅಪಾರ ಅನುಭವ ಸಂಪಾದಿಸಿದ್ದಾರೆ. 1970ರಲ್ಲಿ ಡಬ್ಲಿನ್ ನಲ್ಲಿ ನಡೆದ ಛೇಂಬರ್ ಆಫ್ ಕಾಮರ್ಸ್ ನ ವಿಶ್ವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಅನುಭವ. ಸಮಾಜಮುಖಿ ಧೋರಣೆಯುಳ್ಳ ಶ್ರೀಯುತರು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ದ ಅಮೆರಿಕೆಯಲ್ಲಿ ನಡೆದ ಸಮಾವೇಶದಲ್ಲಿ, ಬೆಂಗಳೂರು ಜೇಸೀಸ್ ಪರವಾಗಿ ಪಾಲ್ಗೊಂಡ ಧುರೀಣರು. ಎಲ್ಲಕ್ಕೂ ಮಿಗಿಲಾಗಿ ಮಾನವೀಯ ಅನುಕಂಪ ಉಳ್ಳವರು. ಕರ್ನಾಟಕ ಪ್ರದೇಶ ಹೋಟೆಲ್ ಗಳ ಸಂಘದಿಂದ 2014 ರಲ್ಲಿ ಆತಿಥ್ಯರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಬ್ಯಾಂಕಿನ ನಿರ್ದೇಶಕರಾಗಿ 1994ರಲ್ಲಿ ಆಯ್ಕೆಯಾಗಿ, 1997ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇಂದಿಗೂ ನಿರ್ದೇಶಕರಾಗಿ ಮುಂದುವರೆದಿದ್ದಾರೆ.

ಶ್ರೀ . ಡಾ. ವಿಷ್ಣುಮೂರ್ತಿ ಐತಾಳ.

 

ಶ್ರೀ . ಡಾ. ವಿಷ್ಣುಮೂರ್ತಿ ಐತಾಳ.

ಉಪಾಧ್ಯಕ್ಷರು
  ಜನ್ಮ ದಿನಾಂಕ: 14-04-1948.  
  ವಿದ್ಯಾರ್ಹತೆ: ಬಿ. ಎಸ್ಸಿ, ಎಮ್.ಬಿ.ಬಿ.ಎಸ್., ಎಮ್. ಎಸ್.  
  ಉದ್ಯೋಗ/ ವ್ಯಾಪಾರ: ವೈದ್ಯರು.  
  ವಿಳಾಸ: ನಂ. 131, "ಚಿತ್ರಕೂಟ", 40ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, 5ನೇ ವಿಭಾಗ, ಜಯನಗರ, ಬೆಂಗಳೂರು - 560041.  
  ಫೋನ್ ನಂ: -  
 

1977ರಿಂದಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನದೇ ಆದ ವ್ಯವಸ್ಥೆಯ ಮೂಲಕ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಖ್ಯಾತ ಮೂಳೆರೋಗ ತಜ್ಞರು, ಶೇಖರ್ ಆಸ್ಪತ್ರೆಯ ಮಾಲೀಕರು, ಕರ್ನಾಟಕ ಹಾಗೂ ಭಾರತೀಯ ಮೂಳೆರೋಗ ತಜ್ಞರ ಸಂಘದ ಸದಸ್ಯರೂ ಆದ ಶ್ರೀಯುತರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ. ಬಿ.ಎಸ್ಸಿ , ಎಂ.ಬಿ.ಬಿ.ಎಸ್., ಎಂ.ಎಸ್., ಮಾಡಿರುವ ಐತಾಳರು 2008ರಲ್ಲಿ ಪ್ರತಿಷ್ಠಿತ ಬಿ.ಸಿ.ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರಮಂಡಳಿ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ.

ಬ್ಯಾಂಕಿನ ನಿರ್ದೇಶಕರಾಗಿ 1999 ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಸುಬ್ಬರಾವ್

 

ಶ್ರೀ ಸುಬ್ಬರಾವ್

ನಿರ್ದೇಶಕರು.
  ಜನ್ಮ ದಿನಾಂಕ: 05-09-1946  
  ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.  
  ಉದ್ಯೋಗ/ ವ್ಯಾಪಾರ: ವ್ಯವಹಾರ.  
  ವಿಳಾಸ: ನಂ.62 " ಶ್ರೀ ಅನಂತ ನಿಲಯ ", 1ನೇ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು -560 020.  
  ಫೋನ್ ನಂ: 23367721  

ಶ್ರೀ ಸುಬ್ರಮಣ್ಯ ಐತಾಳ ಎಸ್.

 

ಶ್ರೀ ಸುಬ್ರಮಣ್ಯ ಐತಾಳ ಎಸ್.

ನಿರ್ದೇಶಕರು.
  ಜನ್ಮ ದಿನಾಂಕ: 17-11-1945.  
  ವಿದ್ಯಾರ್ಹತೆ: 4 ನೇ ತರಗತಿ.  
  ಉದ್ಯೋಗ/ ವ್ಯಾಪಾರ: ವ್ಯವಹಾರ.  
  ವಿಳಾಸ: ನಂ. 1008, "ಶ್ರೀ ಲಕ್ಷ್ಮೀವೆಂಕಟೇಶ್ವರ ನಿಲಯ", 14ನೇ ಅಡ್ಡರಸ್ತೆ, 24ನೇ ಮುಖ್ಯರಸ್ತೆ, ಬಿ.ಎಸ್.ಕೆ. 2ನೇ ಘಟ್ಟ, ಬೆಂಗಳೂರು-560070.  
  ಫೋನ್ ನಂ: 9449671932.  
 

ಪಾಕಶಾಸ್ತ್ರ ಪ್ರವೀಣರಾದ ಶ್ರೀಯುತರು ಶಿಕಾರಿಪುರದಲ್ಲಿ ತಮ್ಮದೇ ಆದ "ಶ್ರೀ ಸತ್ಯನಾರಾಯಣ ಭವನ" ಹೋಟೆಲ್ ಆರಂಭಿಸಿದರು. ಆದರೆ ದೀರ್ಘಕಾಲ ನಡೆಯದೆ ಇದ್ದ ಕಾರಣ ಊರಿಗೆ ಹಿಂದಿರುಗಿ ಅರ್ಚಕ ವೃತ್ತಿ ಹಿಡಿದು ಜೀವನ ನಡೆಸಿದರು. ಜತೆಗೆ ಛಲಬಿಡದ ಐತಾಳರು 1976ರಲ್ಲಿ ಬೆಂಗಳೂರಿಗೆ ಬಂದು ಬ್ಯಾಂಕ್ ಸಾಲ ಪಡೆದು "ಶ್ರೀ ಲಕ್ಷ್ಮೀವೆಂಕಟೇಶ್ವರ ಕಾಫಿ ಬಾರ್" ಮೂಲಕ ಮತ್ತೆ ಹೋಟೆಲ್ ಉದ್ಯಮಕ್ಕೆ ತೊಡಗಿದರು. ಬುಲ್ ಟೆಂಪಲ್ ರಸ್ತೆಯಲ್ಲಿನ ಇವರ ಹೋಟೆಲ್ ಗೆ ವರನಟ ಡಾ. ರಾಜ್ ಕುಮಾರ್ ಅವರು ಭೇಟಿ ನೀಡುತ್ತಿದ್ದ ಕಾರಣ ಚಿತ್ರರಂಗದ ಗಣ್ಯರೊಂದಿಗೆ ಸ್ನೇಹ ಬೆಳೆಸಿಕೊಂಡರು. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಇವರನ್ನು ಸನ್ಮಾನಿಸಿ ಗೌರವಿಸಿದೆ. 1997 ರಿಂದ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ನಿರ್ಮಲ್ ಕುಮಾರ್ ಜಿ.ಡಿ.

 

ಶ್ರೀ ನಿರ್ಮಲ ಕುಮಾರ್ ಜಿ.ಡಿ.

ನಿರ್ದೇಶಕರು.
  ಜನ್ಮ ದಿನಾಂಕ: 10-07-1947.  
  ವಿದ್ಯಾರ್ಹತೆ: ಬಿ. ಎಸ್ಸಿ. ಸಿಎಐಐಬಿ  
  ಉದ್ಯೋಗ/ ವ್ಯಾಪಾರ: ನಿವೃತ್ತ ಎಜಿಎಂ - ಎಸ್.ಬಿ.ಎಂ .  
  ವಿಳಾಸ: ನಂ. 5, ಕೃಷ್ಣಪ್ಪ ಲೇಔಟ್ , ಕಗ್ಗಲಿಪುರ, ಕನಕಪುರ ಮುಖ್ಯರಸ್ತೆ ಎದುರು, ಬೆಂಗಳೂರು - 560062.  
  ಫೋನ್ ನಂ: 7760808563  
 

'ಸರ್.ಎಂ.ವಿ' ಅವರ ದೂರದರ್ಶಿತ್ವದ ಫಲಶ್ರುತಿಯಾಗಿ ಆರಂಭವಾದ ಮೈಸೂರು ಬ್ಯಾಂಕಿನಲ್ಲಿ 1967ರಲ್ಲಿ ವೃತ್ತಿ ಆರಂಭಿಸಿದ ಶ್ರೀಯುತರು ತಮ್ಮ ಸೇವಾ ನೈಪುಣ್ಯದಿಂದ, ಹಲವುಹಂತದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾ, ಅಭಿವೃದ್ಧಿ ಅಧಿಕಾರಿಯಾಗಿ, ಆಸ್ತಿ ನಿರ್ವಹಣಾ ಅಧಿಕಾರಿಯಾಗಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ 2001ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು.

ಬ್ಯಾಂಕ್ ವಲಯದಲ್ಲಿನ ತಮ್ಮ ಅನುಭವವನ್ನು ಇತರೆ ವಿತ್ತೀಯ ಸಂಸ್ಥೆಗಳಿಗೆ ವಿಸ್ತರಿಸಿ ಆರ್ಥಿಕ ಶಿಸ್ತು ತರುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಂಕಿನ ನಿರ್ದೇಶಕರಾಗಿ 2005 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀ ಕೆ. ಶ್ರೀಧರ ಮಯ್ಯ.

 

ಶ್ರೀ ಕೆ. ಶ್ರೀಧರ ಮಯ್ಯ.

ನಿರ್ದೇಶಕರು.
  ಜನ್ಮ ದಿನಾಂಕ: 31-07-1960  
  ವಿದ್ಯಾರ್ಹತೆ: ಬಿ. ಇ.  
  ಉದ್ಯೋಗ/ ವ್ಯಾಪಾರ: ವ್ಯವಹಾರ.  
  ವಿಳಾಸ: ನಂ.43, ವೈಭವ ಎನ್ ಕ್ಲೇವ್, ನೆಲ ಅಂತಸ್ತು, ವಾಣಿವಿಲಾಸ ರಸ್ತೆ, ಬಸವನಗುಡಿ, ಬೆಂಗಳೂರು-560 004.  
  ಫೋನ್ ನಂ: 9845130456  
 

ಶ್ರೀ ಮಂಜುನಾಥ ಬಿ. ಎಸ್.

 

ಶ್ರೀ ಮಂಜುನಾಥ ಬಿ. ಎಸ್.

ನಿರ್ದೇಶಕರು.
  ಜನ್ಮ ದಿನಾಂಕ: 05-04-1949  
  ವಿದ್ಯಾರ್ಹತೆ: 5ನೇ ತರಗತಿ.  
  ಉದ್ಯೋಗ/ ವ್ಯಾಪಾರ: ಹೋಟೆಲ್ ಉದ್ಯಮ  
  ವಿಳಾಸ: ನಂ. 322/26, 24ನೇ ಅಡ್ಡರಸ್ತೆ, 6ನೆ ವಿಭಾಗ, ಜಯನಗರ, ಬೆಂಗಳೂರು - 560082.  
  ಫೋನ್ ನಂ: 9448383198.  
 

ಜೀವನೋಪಾಯಕ್ಕಾಗಿ ಕಾರ್ಮಿಕರಾಗಿ ದುಡಿದು ಅನುಭವ ಗಳಿಸಿ, 1978ರಿಂದ ಹೋಟೆಲ್ ಉದ್ಯಮವನ್ನು ಆರಂಭಿಸಿದರು. ದಕ್ಷಿಣ ಕನ್ನಡ ಗಾಣಿಗರ ಸಮಾಜದ ಅಧ್ಯಕ್ಷರಾಗಿ, ಸಕ್ರಿಯ ಕಾರ್ಯಕರ್ತರಾಗಿ ಸೇವೆಸಲ್ಲಿಸಿದವರು. ಕಳೆದ 15 ವರ್ಷಗಳಿಂದಲೂ ಹೋಟೆಲ್ ಮಾಲೀಕರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. 35 ವರ್ಷಗಳಿಂದ ಬಸ್ರೂರು ಕೊಳನಕೋಡು ಕಂದಾವರ ಈಶ್ವರ ದೇವಾಲಯದ ಮುಕ್ತೇಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮಶೀಲರಾಗಿ ಕಾರ್ಯೋತ್ಸಹದಲ್ಲಿ ತೊಡಗಿರುವ ಶ್ರೀಯುತರು 1997 ರಿಂದ ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು ಕೂಡ ಆಗಿದ್ದಾರೆ.

ಶ್ರೀ ರಾಜೀವ ಶೆಟ್ಟಿ ಎಚ್.ಬಿ.

 

ಶ್ರೀ ರಾಜೀವ ಶೆಟ್ಟಿ ಎಚ್.ಬಿ.

ನಿರ್ದೇಶಕರು.
  ಜನ್ಮ ದಿನಾಂಕ: 10-10-1957.  
  ವಿದ್ಯಾರ್ಹತೆ: 7ನೇ ತರಗತಿ.  
  ಉದ್ಯೋಗ/ ವ್ಯಾಪಾರ: ಹೋಟೆಲ್ ಉದ್ಯಮ  
  ವಿಳಾಸ: ನಂ. 12/9, "ಗುರುಕೃಪ", ಸರಸ್ವತಿ ಅಮ್ಮಾಳ ರಸ್ತೆ, ಮಾರುತಿ ಸೇವಾ ನಗರ, ಬೆಂಗಳೂರು - 560033.  
  ಫೋನ್ ನಂ: 9845931600.  
 

1971ರಲ್ಲಿ ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ಶ್ರೀಯುತರು ಹೋಟೆಲ್ ಕಾರ್ಮಿಕನಾಗಿ, 1978ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಸಂಘ ಸಂಸ್ಥೆಗಳಲ್ಲಿ ಉತ್ಸಾಹಿ ತರುಣನಾಗಿ ತಮ್ಮ ಸಮಾಜ ಸೇವೆಯನ್ನು ಆರಂಭಿಸಿದ ರಾಜೀವ ಶೆಟ್ಟರು, ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ, ಕನ್ನಡ ಸರ್ವೋದಯ ಸಂಘ, ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಇಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಭಾಷಾ ಪ್ರೇಮಿಯಾದ ಇವರು ದಂಡು ಪ್ರದೇಶದ ಕನ್ನಡ ಪರ ಸಂಘಟನೆಯ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ, ಕಲಾರಸಿಕರಾದ ಶ್ರೀಯುತರು ಯಕ್ಷಕಲಾ ರಂಗದ ಅಧ್ಯಕ್ಷರೂ ಹೌದು. ಬ್ಯಾಂಕಿನ ನಿರ್ದೇಶಕರ ಮಂಡಳಿಯಲ್ಲಿ 1998 ರಿಂದ ನಿರ್ದೇಶಕರಾಗಿದ್ದಾರೆ.

ಶ್ರೀ ಕೃಷ್ಣಮೂರ್ತಿ ಐತಾಳ್

 

ಶ್ರೀ ಕೃಷ್ಣಮೂರ್ತಿ ಐತಾಳ್

ನಿರ್ದೇಶಕರು.
  ಜನ್ಮ ದಿನಾಂಕ: 12-11-1961  
  ವಿದ್ಯಾರ್ಹತೆ: ಬಿ.ಕಾಂ., ಸಿಎಐಐಬಿ  
  ಉದ್ಯೋಗ/ ವ್ಯಾಪಾರ: ವಿ ಆರ್ ಎಸ್ ಸಹಾಯಕ ವ್ಯವಸ್ಥಾಪಕರು ಎಸ್.ಬಿ.ಎಂ.  
  ವಿಳಾಸ: ನಂ.98, ಹೊಸ ನಂ. 3, "ದ್ವಾರಕ", 6ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಎನ್.ಆರ್. ಕಾಲೋನಿ, ಬೆಂಗಳೂರು-560 019.  
  ಫೋನ್ ನಂ: 9886757366  
 

ಶ್ರೀಮತಿ ತಾರ ಎಸ್. ಐತಾಳ.

 

ಶ್ರೀಮತಿ ತಾರ ಎಸ್. ಐತಾಳ.

ನಿರ್ದೇಶಕರು.
  ಜನ್ಮ ದಿನಾಂಕ: 04-12-1963.  
  ವಿದ್ಯಾರ್ಹತೆ: ಬಿ. ಕಾಂ.  
  ಉದ್ಯೋಗ/ ವ್ಯಾಪಾರ: ಗೃಹಿಣಿ  
  ವಿಳಾಸ: ನಂ. 8,"ವಾಗ್ದೇವಿ", ಪಾರ್ಕ್ ವಿವ್ ಅಪಾರ್ಟ್ ಮೆಂಟ್, 2ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ಗವಿಪುರಂ ಎಕ್ಸಟೆನ್ಶನ್, ಬೆಂಗಳೂರು - 560019.  
  ಫೋನ್ ನಂ: 9740318202.  
 

ಆಧುನಿಕ ಮನೋಭಾವವನ್ನು ರೂಢಿಸಿಕೊಂಡಿರುವ ದಿಟ್ಟ ಮಹಿಳೆ. ಯಾವುದೇ ಆಘಾತವನ್ನು ಧೈರ್ಯದಿಂದ ಎದುರಿಸಲು ಕಲಿತ ನುರಿತ ಮಹಿಳೆ. ಗೃಹಕೃತ್ಯಗಳನ್ನು ನೆರವೇರಿಸುವುದರ ಜತೆಜತೆಗೆ ಸಾಮಾಜಿಕವಲಯದಲ್ಲೂ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆರ್ಥಿಕ ಸಂಸ್ಥೆಗಳಂಥ ವಲಯದಲ್ಲೂ ತಮ್ಮ ಪ್ರತಿನಿಧಿತ್ವವನ್ನು ಸಂಪಾದಿಸಿಕೊಂಡಿದ್ದಾರೆ. ನುರಿತ ನಿರ್ದೇಶಕರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1997 ರಿಂದ ಬ್ಯಾಂಕಿನ ಮಹಿಳಾ ಮೀಸಲು ಸ್ಥಾನದ ನಿರ್ದೇಶಕರಾಗಿ ಮುಂದುವರೆದಿರುತ್ತಾರೆ.

ಶ್ರೀಮತಿ ಪಿ. ಮಂಗಳ .

 

ಶ್ರೀಮತಿ ಪಿ. ಮಂಗಳ .

ನಿರ್ದೇಶಕರು.
  ಜನ್ಮ ದಿನಾಂಕ: 25-03-1964  
  ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.  
  ಉದ್ಯೋಗ/ ವ್ಯಾಪಾರ: ಗೃಹಿಣಿ  
  ವಿಳಾಸ: ನಂ.37, ಮಂಟಪಗೃಹ, 4ನೇ ಮುಖ್ಯರಸ್ತೆ, ರಾಮಮೋಹನಪುರ, ದೇವಯ್ಯಪಾರ್ಕ್- ಶ್ರೀರಾಂಪುರ ಮೆಟ್ರೋ, ಬೆಂಗಳೂರು-560 021.  
  ಫೋನ್ ನಂ: 9448240382  
 

ಶ್ರೀ ಮುರಳೀಧರ ಕೆ.

 

ಶ್ರೀ ಮುರಳೀಧರ ಕೆ.

ನಿರ್ದೇಶಕರು.
  ಜನ್ಮ ದಿನಾಂಕ: 10-07-1965.  
  ವಿದ್ಯಾರ್ಹತೆ: ಬಿ. ಕಾಂ., ಎಫ್.ಸಿ.ಎ  
  ಉದ್ಯೋಗ/ ವ್ಯಾಪಾರ: ಲೆಕ್ಕಪರಿಶೋಧಕರು.  
  ವಿಳಾಸ: ನಂ. 224/A, 8ನೇ ಅಡ್ಡರಸ್ತೆ, 1ನೇ ಹಂತ, 5ನೇ ಘಟ್ಟ, ವೆಸ್ಟ್ ಆಫ್ ಕಾರ್ಡ್ ರೋಡ್, ಬೆಂಗಳೂರು - 560044.  
  ಫೋನ್ ನಂ: 9845143639.  
 

ಲೆಕ್ಕಪತ್ರಗಳಲ್ಲಿ ನಿಪುಣರಾದ ಇವರು ಸನ್ನದು ಲೆಕ್ಕಿಗರಾಗಿ, ತಮ್ಮ ಸ್ಥಾನ ಗೌರವವನ್ನು ಪಡೆದುಕೊಂಡಿದ್ದಾರೆ. 1992ರಲ್ಲಿ ಲೆಕ್ಕ ಪರಿಶೋಧನಾ ಕಾರ್ಯಕ್ಕೆ ತೊಡಗಿಸಿಕೊಂಡ ಶ್ರೀಯುತರು 1995ರಲ್ಲಿ ಕೆ. ಮುರಳೀಧರ & ಕಂಪೆನಿ ಸಂಸ್ಥೆಯನ್ನು ಆರಂಭಿಸಿದರು. 2004ರ ವೇಳೆಗೆ ಇವರ ಕಾರ್ಯಕ್ಷಮತೆಯನ್ನು ಪರಿಗಣಿಸಿದ ರಾಷ್ಟೀಯ ಸನ್ನದು ಸಂಸ್ಥೆ ಇವರಿಗೆ ಸಂಸ್ಥೆಯ ಸದಸ್ಯ ಗೌರವವನ್ನು ನೀಡಿ ಪುರಸ್ಕರಿಸಿತು. F.C.A ಎಂದು ಮಾನ್ಯ ಮಾಡಿತು. ಸಮಾಜಮುಖಿಯಾದ ಇವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರಮಂಡಳಿ ನಿರ್ದೇಶಕರೂ ಆಗಿದ್ದರು. ಬ್ಯಾಂಕಿನ ವೃತ್ತಿಪರ ನಿರ್ದೇಶಕ ಸ್ಥಾನದಿಂದ 2005 ರಿಂದ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀ ಕುಮಾರ್ ಎಚ್. ಎಸ್.

 

ಶ್ರೀ ಕುಮಾರ್ ಎಚ್. ಎಸ್.

ನಿರ್ದೇಶಕರು.
  ಜನ್ಮ ದಿನಾಂಕ: 01-06-1968.  
  ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.  
  ಉದ್ಯೋಗ/ ವ್ಯಾಪಾರ: ಬೆಂಗಳೂರು ವಿಶ್ವವಿದ್ಯಾಲಯದ ಸಿಬ್ಬಂದಿ  
  ವಿಳಾಸ: ನಂ. 48/1, ಮೆಟ್ರೋ ಲೇಔಟ್, ರೈಲ್ವೇ ಗೇಟ್ ಹತ್ತಿರ, ಮೈಸೂರು ರಸ್ತೆ , ಬೆಂಗಳೂರು - 560039.  
  ಫೋನ್ ನಂ: 9480549596.  
 

ಬೆಂಗಳೂರು ವಿಶ್ವವಿದ್ಯಾಲಯದ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಸಹಕಾರಿ ವಲಯಕ್ಕೂ ಪದಾರ್ಪಣ ಮಾಡಿದ್ದಾರೆ. ಜನರೊಂದಿಗೆ ಬೆರೆಯುವ ಗುಣದಿಂದಾಗಿ ಜನಪ್ರಿಯರಾಗಿದ್ದಾರೆ. ಸಂಘಟನೆಯಲ್ಲೂ ಮುಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಕಾಳಜಿ ಇರುವ ಶ್ರೀಯುತರು ತಮ್ಮ ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿದ್ದು, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲದ ಶಿಕ್ಷಕೇತರ ಸಂಘದ ಕೋಶಾಧ್ಯಕ್ಷರಾಗಿ ಕಳೆದ 18 ವರ್ಷದಿಂದ ಅವಿರತವಾಗಿ ದುಡಿಯುತ್ತಿದ್ದಾರೆ. ಬ್ಯಾಂಕಿನ ಪರಿಶಿಷ್ಟ ಜಾತಿ/ಪಂಗಡ ಮೀಸಲು ನಿರ್ದೇಶಕ ಸ್ಥಾನದಿಂದ 2010 ರಿಂದ ಆಯ್ಕೆಯಾಗಿರುತ್ತಾರೆ.

ಶ್ರೀ ಪ್ರಸಾದ್ ಜಿ.ಎನ್.

 

ಶ್ರೀ ಪ್ರಸಾದ್ ಜಿ.ಎನ್.

ನಿರ್ದೇಶಕರು.
  ಜನ್ಮ ದಿನಾಂಕ: 07-04-1972.  
  ವಿದ್ಯಾರ್ಹತೆ: ಪಿ.ಯು.ಸಿ.  
  ಉದ್ಯೋಗ/ ವ್ಯಾಪಾರ: ವ್ಯವಹಾರ (ಹಂದೆ ಹಾಲ್ )  
  ವಿಳಾಸ: ನಂ. 733/A, 10ನೇ ಮುಖ್ಯರಸ್ತೆ, 4ನೇ ವಿಭಾಗ, ಜಯನಗರ, ಬೆಂಗಳೂರು - 560011.  
  ಫೋನ್ ನಂ: 9448044266.  
 

'ಹಂದೆ ಹಾಲ್ ' ನ ಪಾಲುದಾರರು, 1991 ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಇವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಜಯನಗರ ಘಟಕದ ಅಧ್ಯಕ್ಷರು. ಕೋಶಾಧ್ಯಕ್ಷರಾಗಿ ಅನುಭವ ಪಡೆದು ಹಣಕಾಸು ನಿರ್ವಹಣೆಯಲ್ಲಿ ಖ್ಯಾತಿ ಗಳಿಸಿದ್ದಾರೆ.

ಹೋಟೆಲ್ ಉದ್ಯಮವೇ ಅಲ್ಲದೇ ರಾಜಕೀಯ ಕ್ಷೇತ್ರದಲ್ಲೂ ತಮ್ಮ ನಾಯಕತ್ವ ಪ್ರದರ್ಶಿಸಿದ್ದಾರೆ. ಯುವ ನೇತಾರನ ಎಲ್ಲ ಗುಣಗಳನ್ನು ಶ್ರೀಯುತರು ಮೈಗೂಡಿಸಿಕೊಂಡಿದ್ದಾರೆ. ಬ್ಯಾಂಕಿನ ನಿರ್ದೇಶಕರಾಗಿ 2010 ರಿಂದ ಆಯ್ಕೆಯಾಗಿರುತ್ತಾರೆ.

ಶ್ರೀ ಅರುಣಕುಮಾರ್ ಅಡಿಗ

 

ಶ್ರೀ ಅರುಣಕುಮಾರ್ ಅಡಿಗ

ನಿರ್ದೇಶಕರು.
  ಜನ್ಮ ದಿನಾಂಕ: 19-07-1973  
  ವಿದ್ಯಾರ್ಹತೆ: ಬಿ.ಇ.  
  ಉದ್ಯೋಗ/ ವ್ಯಾಪಾರ: ವ್ಯವಹಾರ.  
  ವಿಳಾಸ: ನಂ.80/1, ಸೌತ್ ಎಂಡ್ ರಸ್ತೆ, ಬಸವನಗುಡಿ, ಬೆಂಗಳೂರು-560004  
  ಫೋನ್ ನಂ: 9341214292  
 

ಶ್ರೀ ಶ್ಯಾಮಸುಂದರ್ ಐತಾಳ. ಕೆ

 

ಶ್ರೀ ಶ್ಯಾಮಸುಂದರ ಐತಾಳ. ಕೆ

ಕಾರ್ಯದರ್ಶಿ
  ಜನ್ಮ ದಿನಾಂಕ: 03-10-1969  
  ವಿದ್ಯಾರ್ಹತೆ: ಬಿ.ಕಾಂ.  
  ಉದ್ಯೋಗ/ ವ್ಯಾಪಾರ: ಕಾರ್ಯದರ್ಶಿ  
  ವಿಳಾಸ: "ಕಾರ್ತಿಕೇಯ", ನಂ. 20/1, 1ನೇ ಮಹಡಿ, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ವಿನೋಬ ಕಾಲೋನಿ, ಅವಲಹಳ್ಳಿ,ಬೆಂಗಳೂರು- 560018.  
  ಫೋನ್ ನಂ: 9449812350  
 

1992ರಲ್ಲಿ ಕಿರಿಯ ಸಹಾಯಕರಾಗಿ ಸೇರ್ಪಡೆ. 1997 ರಲ್ಲಿ ಶಾಖಾ ವ್ಯವಸ್ಥಾಪಕರಾಗಿ ಪುನರ್ ನೇಮಕಾತಿಗೊಂಡು 2005 ರಲ್ಲಿ ಮುಖ್ಯ ಲೆಕ್ಕಧಿಕಾರಿಯಾಗಿ ಮುಂಬಡ್ತಿ ಹೊಂದಿರುತ್ತಾರೆ. 2001 ರಿಂದ ಕಾರ್ಯದರ್ಶಿಯವರ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 2009 ರಲ್ಲಿ ವೇತನ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿರುತ್ತಾರೆ.


TOP
BACK