ಯಾವುದೇ ಶಾಖಾ ಬ್ಯಾಂಕಿಂಗ್ (Any Branch Banking - ABB ) ಸೌಲಭ್ಯದ ವಿವರಗಳು:


  • ನಗದು ಜಮಾವಣೆಯನ್ನು ರೂ. 5,00,000/- (ಐದು ಲಕ್ಷ ರೂಪಾಯಿಗಳು)ದ ವರಗೆ ದಿನ ಒಂದಕ್ಕೆ ಮಾತ್ರ ಮಾಡಬಹುದಾಗಿದೆ. ಚಾಮರಾಜಪೇಟೆ ಶಾಖೆಯಲ್ಲಿ ಮಾತ್ರ ಬೇರೆ ಶಾಖೆಗಳ ಖಾತೆದಾರರು ರೂ. 5 ಲಕ್ಷಕ್ಕೂ ಹೆಚ್ಚಿನ ನಗದನ್ನು ಜಮಾ ಮಾಡಬಹುದು.
  • ಬ್ಯಾಂಕಿನ ಯಾವುದೇ ಶಾಖೆಯಲ್ಲಿ ತಮ್ಮ ಉಳಿತಾಯ / ಚಾಲ್ತಿ ಖಾತೆಯಿಂದ ರೂ.1ಲಕ್ಷದ ವರೆಗೆ ಮಾತ್ರ ತಮ್ಮ ಪಾಸ್ ಪುಸ್ತಕವನ್ನು ತೋರಿಸಿ ಸ್ವಂತ ವಿತ್ ಡ್ರಾವೆಲ್ ಯಾ ಚೆಕ್ಕು ಮೂಲಕ ನಗದನ್ನು ಪಡೆಯಬಹುದು.
  • ಯಾವ ಶಾಖೆಯಲ್ಲಾದರು ತಮ್ಮ ಉಳಿತಾಯ / ಚಾಲ್ತಿ ಖಾತೆಗಳ ಪಾಸ್ ಪುಸ್ತಕವನ್ನು ನಮೂದಿಗಾಗಿ ನೀಡಬಹುದು.
  • ಯಾವುದೇ ಶಾಖೆಯಲ್ಲಿ ತನ್ನ ಉಳಿತಾಯ / ಚಾಲ್ತಿ ಖಾತೆಯಿಂದ ಇನ್ನೊಂದು ಶಾಖೆಯ ತನ್ನ ಸ್ವಂತ ಯಾ ಬೇರೆಯವರ ಖಾತೆಗಳಿಗೆ ಯಾವುದೇ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ.
  • ಯಾವುದೇ ಶಾಖೆಯಲ್ಲಿ ಬೇರೆ ಶಾಖೆಯ ಖಾತೆಗಳಿಗೆ ಯಾವುದೇ ಮೊತ್ತದ ಚೆಕ್ಕುಗಳನ್ನು ತೀರುವಳಿಗಾಗಿ (Clearing) ನೀಡಬಹುದಾಗಿದೆ.
  • ನಿಶ್ಚಿತ ಠೇವಣಿಯ ಬಡ್ಡಿಯನ್ನು ಯಾವುದೇ ಶಾಖೆಯ ಇನ್ನಿತರ ಖಾತೆಗಳಿಗೆ ವರ್ಗಾಯಿಸಬಹುದು.
  • ಸಂಚಿತ ಠೇವಣಿಯ (Recurring Deposit) ಪ್ರತಿ ತಿಂಗಳ ಕಂತನ್ನು ಯಾವುದೇ ಶಾಖೆಯಿಂದ ಪಾವತಿಸಬಹುದಾಗಿದೆ.
  • ಯಾವುದೇ ಶಾಖೆಗಳ ಸಾಲದ ಕಂತುಗಳನ್ನು ಯಾವುದೇ ಶಾಖೆಯಲ್ಲಾದರೂ ಪಾವತಿಸಬಹುದು.

ಮೇಲೆ ತಿಳಿಸಿರುವ ಮಾಹಿತಿಗಳು ಸಾಮಾನ್ಯ ಸಂಗತಿ (General Information) ಗಳಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸುವುದು.